ಆಚಾರವಿಲ್ಲದ ನಾಲಿಗೆ
🙏 Theme: ಹರಿನಾಮ ಸ್ಮರಣೆ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ ಚಾಚಿಕೊಂಡಿರುವಂತ ನಾಲಿಗೆ ಪ್ರಾತಃಕಾಲದೊಳೆದ್ದು ನಾಲಿಗೆ ಶ್ರೀಪತಿ ಎನ್ನಬಾರದೆ ನಾಲಿಗೆ ಪತಿತ ಪಾವನ ನಮ್ಮ ರತಿಪತಿ ಜನಕನ ಸತತವು ನುಡಿ ಕಂಡ್ಯ ನಾಲಿಗೆ ಚಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿ ಕೊಂಬೆನು ನಾಲಿಗೆ ರೂಡಿಗೊಡೆಯ ಶ್ರೀರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ ವರದ ಪುರಂದರ ವಿಠಲ ರಾಯನ ಚರಣ ಕಮಲ ನೆನೆ ನಾಲಿಗೆ
English Transliteration
Aachaaravillada naalige ninna Neecha buddhiya bidu naalige Vichaaravillade parara dushisuvudakke Chaachikondiruvanta naalige Praatahkaaladaleddu naalige Shripati ennabaarade naalige Patita paavana namma ratipati janakana Satatavu nudi kandya naalige Chaadi helalu beda naalige Ninna bedi kombenu naalige Roodigodeya Sri Ramana naamava Paadutaliru kandya naalige Hariya smarane maadu naalige Narahariya bhajisu kandya naalige Varada Purandara Vittala Raayana Charana kamala nene naalige
PurandaraDasa, DasaraPadagalu, Rama, Vishnu, KannadaLyrics, DevotionalSongs
Comments
Post a Comment