ಅಧಿಕ ಮಾಸ ಬಂದು Lyrics | Adhika Masa Bandu Kannada Lyrics

ಅಧಿಕ ಮಾಸ ಬಂದು

🎵 Song: ಅಧಿಕ ಮಾಸ ಬಂದು
🙏 Theme: ಅಧಿಕ ಮಾಸ ಮಹಿಮೆ / ವಿಷ್ಣು ಭಕ್ತಿ
📜 Category: ಭಜನೆಗಳು

ಕನ್ನಡ ಸಾಹಿತ್ಯ

ಅಧಿಕ ಮಾಸ ಬಂದು ಅಧಿಕಾನಂದ ತಂದು ಅಗಣಿತ ಮಹಿಮನ ಆರಾಧಿ ಸಲೆಂದು ಅಧಿಕ ಅಧಿಕವಾಗಿ ಅನುಗ್ರಹ ಪೊಂದಲು ಅಪೂಪ ದಾನಗಳ ನೀಡೆನ್ನಲು || ಪ || ಅಷ್ಟವಸುಗಳು ಏಕಾದಶ ರುದ್ರರು ದ್ವಾದಶ ಆದಿತ್ಯರ ಸಹಿತವಾಗಿ ವಷಟ್ ಕಾರ ಮತ್ತು ಭಗಧಾತು ಎಂದು ಮೂವತ್ತೂಮುರೂ ರಂಗೋಲಿ ಹಾಕಿ || 1 || ಅಧಿಕಮಾಸದಲ್ಲಿ ಮುದಮನದಿಂದ ಭಕ್ತರಿಗೆ ದಾನವ ಮಾಡಲು ಅಧಿಕಧಿಕವಾಗಿ ಫಲ ಬರುವುದೆಂದು ಪದುಮನಾಭನ ದಯೆ ಸಿಗುವುದೆಂದೂ || 2 || ವ್ರತನೇಮ ಉಪವಾಸ ದಂಪತ್ತು ಭೋಜನ ಲಕ್ಷ ಬತ್ತಿ ಲಕ್ಷ ನಮಸ್ಕಾರಾವು ಏಕ ಭುಕ್ತಿ ದಿಕ್ಕು ಬದಲಿಸಿ ಊಟ ಧಾರಣೆ ಪಾರಣೆ ವಿಷ್ಣುಪಂಚಕವು || 3 || ಲಕ್ಷ ಪುಷ್ಪಾರ್ಚನೆ ಮೌನವ್ರತವು ಬಳಿಕ ಅರಿಸಿನ ಕುಂಕುಮ ಮರದ ಬಾಗಿಣವು ವಸ್ತ್ರಗಳ ದಾನಗಳು ಭಾಗವತ ಶ್ರವಣ ಪುರಾಣಾದಿಗಳ ಮನನವೂ || 4 || ನಿತ್ಯ ದಾನಗಳ ದಾನ ವಿವಿಧ ಫಲಗಳ ದಾನ ನಿತ್ಯ ಗೆಜ್ಜೆವಸ್ತ್ರದ ದಾನವು ನಾರೀಕೇಳದ ದಾನ ಕಲ್ಲು ಸಕ್ಕರೆ ದಾನ ಖರ್ಜೂರದಾ ದಾನಗಳು || 5 || ಹಾಲು ಮೊಸರಿನ ದಾನ ಅಡಿಕೆ ವಿಳೆದೆಲೆ ದಾನ ಸಾಲಿಗ್ರಾಮದ ದಾನಗಳು ಭಾಗವತ ಗ್ರಂಥದ ದಾನವು ಮುವ್ವತ್ತ ಮೂರು ದಾಸರ ಪದ ಗಾಯನವು || 6 || ದಿನದಿನವು ಮನೆಯಲ್ಲಿ ಶಾಂತಿಯು ನೆಲೆಸುವುದು ಅನುದಿನ ಆನಂದವಾಗುವುದು ಸಚ್ಚಿದಾನಂದನ ದಯೆ ಸಿಗಲೆಂದು ಮಧ್ವೇಶ ಕೃಷ್ಣನಲಿ ಬೇಡುವುದು || 7 ||

English Transliteration

Adhika maasa bandu adhikaananda tandu Aganita mahimana aaraadhi salendu Adhika adhikavaagi anugraha pondalu Apoopa daanagala needennalu || PA || Ashta vasugalu ekaadasha rudraru Dvaadasha aadityara sahitavaagi Vashat kaara mattu bhagadhaatu endu Moovattumuroo rangoli haaki || 1 || Adhikamaasadalli mudamanadinda Bhaktarige daanava maadalu Adhika adhikavaagi phala baruvudendu Padumanaabhan daye siguvudendoo || 2 || Vratanema upavaasa dampattu bhojana Laksha batti laksha namaskaaraavu Eka bhukti dikku badalisi oota Dhaarane paarane Vishnupanchakavu || 3 || Laksha pushpaarchane mounavratavu balika Arisina kunkuma marada baaginavu Vastragala daanagalu Bhaagavata shravana Puraanaadigala mananavoo || 4 || Nitya daanagala daana vividha phalagala daana Nitya gejjevastrada daanavu Naareekelada daana kallu sakkare daana Kharjoorada daanagalu || 5 || Haalu mosarina daana adike viledele daana Saaligraamada daanagalu Bhaagavata granthada daanavu Muvvatta mooru daasara pada gaayanavu || 6 || Dinadinavu maneyalli shaantiyu nelesuvudu Anudina aanandavaaguvudu Sachchidaanandana daye sigalendu Madhvesha Krishnanali beduvudu || 7 ||

🏷 Labels:
AdhikaMasa, Vishnu, Bhajans

Comments