ಗಂಗದಿ ಸಕಲ ತೀರ್ಥಂಗಳ
🙏 Theme: ಹರಿನಾಮ ಮಹಿಮೆ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಗಂಗದಿ ಸಕಲ ತೀರ್ಥಂಗಳ ಫಲವಿದು ಹರಿಯನಾಮ ಹಿಂಗದೆ ಜನರಿಗೆ ಮಂಗಳಕರವಿದು ಹರಿಯನಾಮ ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ ಆದಿಪುರುಷನ ಪೂಜಿಸದವಗೆ ಹರಿಯನಾಮ ಸಾಧಿಸಬೇಕು ಮೋಕ್ಷವೆಂಬುವರಿಗೆ ಹರಿಯನಾಮ ಶೋಧಿಸಿ ಇಟ್ಟ ಚಿನ್ನದಗಟ್ಟಿ ಕಾಣಿರೋ ಹರಿಯನಾಮ ಸ್ನಾನ ಸಂಧ್ಯವಂದನೆ ಮಾಡದವಗೆ ಹರಿಯನಾಮ ಜ್ಞಾನವಿಲ್ಲದ ಮೂಢಾತ್ಮ ಜನರಿಗೆ ಹರಿಯನಾಮ ದಾನಧರ್ಮಕನುಕೂಲ ಇಲ್ಲದವಗೆ ಹರಿಯನಾಮ ಮಾನುಷ ಜನ್ಮ ಸಫಲ ಮಾಡುವದೈ ಹರಿಯನಾಮ ವ್ಯಾಳವ್ಯಾಳ ಕೆಚ್ಚರಿಕೆಯ ಕೊಡುವುದು ಹರಿಯನಾಮ ಜಾಡಿಗೆ ಹೊನ್ನು ತುಂಬಿಟ್ಟಂತೆ ಕಾಣಿರೋ ಹರಿಯನಾಮ ಕಾಲನ ದೂತರಿಗಡಿಗಿಸ ಬಿಡುವುದು ಹರಿಯನಾಮ ಲೋಲ ಶ್ರೀಪುರಂದರ ವಿಠಲರಾಯನ ದಿವ್ಯನಾಮ
English Transliteration
Gangadi sakala teerthangala phalavidu Hariya naama Hingade janarige mangalakaravidu Hariya naama Vedashaastragala odalaridadavige Hariya naama Aadipurushana poojisadavarige Hariya naama Saadhisabeku moksha vembuvavarige Hariya naama Shodhisi itta chinnadagatti kaaniro Hariya naama Snaana sandhyavandane maadadavarige Hariya naama Jnaanavillada moodaatma janarige Hariya naama Daanadharmakanukoola illadavarige Hariya naama Maanusha janma saphala maaduvadayi Hariya naama Vyaala vyaala kechcharikey koduvudu Hariya naama Jaadige honnu tumbittante kaaniro Hariya naama Kaalana dootarigadigisa biduvudu Hariya naama Lola Sri Purandara Vittalaraayana divya naama
HariNama, Vishnu, PurandaraDasa, DasaraPadagalu, KannadaLyrics, DevotionalSongs
Comments
Post a Comment