ಹರಿ ನೀನೆ ಗತಿಯೆಂದು
🙏 Theme: ಶ್ರೀ ಹರಿ ಭಕ್ತಿ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಹರಿ ನೀನೆ ಗತಿಯೆಂದು ನೆರೆ ನಂಬಿದವರನು ಮರೆತಿರುವುದು ನ್ಯಾಯವೆ ಗರುಡಗಮನ ನೀ ಸಿರಿಲೋಲನಾಗಿರೆ ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ ದೃಷ್ಟಿ ಎನ್ನೊಳಗಿದೆಯ ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ ದುಷ್ಟಕರ್ಮವ ಬಿಡಿಸಿ ದಿಟ್ಟನೆಂದನಿಸೊ ಭುಜಗಶಯನ ನಿನ್ನ ಭಜಕರ ಹೃದಯದಿ ನಿಜವಾಗಿ ನೀನಿಲ್ಲವೆ ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ ಸುಜನಪಾಲಕನೆಂದು ಭಜನೆ ಮಾಳ್ಪುದು ಕಂಡು ಭಾಗವತರರಸನೆ ಯೋಗಿಗಳೊಡೆಯನೆ ಬಾಗಿ ಬಿನ್ನವಿಪೆ ನಿನ್ನ ಸಾಗರಶಯನನೆ ನೀಗಿಸಿ ಶ್ರಮವನು ಜಾಗು ಮಾಡದೆ ಎನ್ನ ಬೇಗದಿ ಕಾಯಯ್ಯ ತುಂಟರೈವರ ತುಳಿದು ಕಂಟಕೊಬ್ಬನ ಕಳೆದು ಎಂಟು ಮಂದಿಯ ಗರ್ವವನಳಿದು ನೆಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ ಉಂಟಾದ ವೈಕುಂಠಬಂಟನೆಂದೆನಿಸೊ ಧರಣಿಯೊಳಗೆ ನೀ ಸುಜನರ ಸಲಹುವ ಬಿರುದು ಪಡೆದವನಲ್ಲವೆ ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೋ ಪರಮಪುರುಷ ಸಿರಿ ಪುರಂದರವಿಠಲ
English Transliteration
Hari neene gatiyendu nere nambidavaranu Maretiruvudu nyaayave Garudagamana nee sirilolanagire Arasi ennanu kaayva doregalinnaraayya Mutti poojisi ninna ishtava beduva Drushti ennolagide Kashtava padalaare srushtiyolage enna Dushtakarmava bidisi dittanendaniso Bhujagashayana ninna bhajaka hrudayadi Nijavaagi neenillave Ajana pitane kelu trijagavellavu ninna Sujanapaalakaneendu bhajane maalpudu kandu Bhagavatarasane yogigalodeyane Baagi binnavipe ninna Saagarashayanane neegisi shramavanu Jaagu maadade enna begadi kaayayya Tuntarivara tulidu kantakobbana kaledu Entu mandiya garvavan alidu Nenta nee bandenna kantakavane bidisi Untaada Vaikuntha bantaneniso Dharaniyolage nee sujanara salahuva Birudu paDedavanallave Siriramana enna karunadindali kaayo Parama Purusha Sri Purandara Vittala
Vishnu, PurandaraDasa, DasaraPadagalu, KannadaLyrics, DevotionalSongs
Comments
Post a Comment