ಕುರುಡು ನಾಯಿ ಸಂತೆಗೆ ಬಂತಂತೆ Lyrics | Kurudu Naayi Santhege Kannada Lyrics

ಕುರುಡು ನಾಯಿ ಸಂತೆಗೆ ಬಂತಂತೆ

🎵 Song: ಕುರುಡು ನಾಯಿ ಸಂತೆಗೆ ಬಂತಂತೆ
🙏 Theme: ಪುರಂದರ ವಿಠಲ / ಜೀವನೋಪದೇಶ
✍ Composer: ಪುರಂದರ ದಾಸರು
📜 Category: ದಾಸರ ಪದಗಳು

ಕನ್ನಡ ಸಾಹಿತ್ಯ

ಕುರುಡು ನಾಯಿ ಸಂತೆಗೆ ಬಂತಂತೆ ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ ಹೆಂಡಿರ ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ ಭರದಿ ಅಂಗಡಿ ಹೊಕ್ಕಿತಂತೆ ತಿರುವಿ ದೊಣ್ಣೆಲಿ ಇಕ್ಕಿದರಂತೆ ಮರೆತರಿನ್ನು ವ್ಯರ್ಥವಂತೆ ನರಕದೊಳಗೆ ಬಿದ್ದಿತಂತೆ ವೇದಶಾಸ್ತ್ರವ ನೋದಿತಂತೆ ಗಾದೆಯ ಮಾಡಿ ಬಿಟ್ಟಿತಂತೆ ಹಾದಿ ತಪ್ಪಿ ನಡೆದು ಯಮನ ಬಾಧೆಗೆ ತಾ ಗುರಿಯಾಯಿತಂತೆ ನಾನಾ ಜನ್ಮವನೆತ್ತಿತಂತೆ ಮಾನವನಾಗಿ ಹುಟ್ಟಿತಂತೆ ಕಾನನ ಕಾನನ ತಿರುಗಿತಂತೆ ತಾನು ತನ್ನನೆ ಮರೆಯಿತಂತೆ ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆದೀತಂತೆ ರಂಗ ಪುರಂದರವಿಠಲನ ಮರೆತು ಭಂಗ ಬಹಳ ಪಟ್ಟಿತಂತೆ

English Transliteration

Kurudu naayi santhege bantante Khanda sakkare hitavillavante Khanda elubu kadiditante Hendira makkala nechchitante Kondu hoguvaaga yaarillavante Bharadi angadi hokkitante Tirugi donnelI ikkidaranta Maretarinnu vyarthavante Narakadolage bidditante Veda shaastrava noditante Gaadeya maadi bittitante Haadi tappi nadedu Yamana Baadhege taa guriyaitante Naanaa janmavanettitante Maanavanaagi huttitante Kaanana kaanana tirugitante Taanu tannane mareyitante Mangana kaiya maanikyadante Haangu heengu kaladitante Ranga Purandara Vitthalana maretu Bhanga bahala pattitante

🏷 Labels:
PurandaraDasa, Vittala, DasaraPadagalu

Comments