ನಾರಾಯಣ ಎನ್ನಿರೋ Lyrics | Narayana Enniro Kannada Lyrics

ನಾರಾಯಣ ಎನ್ನಿರೋ

🎵 Song: ನಾರಾಯಣ ಎನ್ನಿರೋ
🙏 Deity: ನಾರಾಯಣ / ವಿಠ್ಠಲ
✍ Composer: ಪುರಂದರ ದಾಸರು
📜 Category: ದಾಸರ ಪದಗಳು

ಕನ್ನಡ ಸಾಹಿತ್ಯ

ನಾರಾಯಣ ಎನ್ನಿರೋ ಶ್ರೀ ನರಹರಿ ಪಾರಾಯಣ ಮಾಡಿರೋ ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೊ ಕಾಶಿಗೆ ಹೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ ವಾಸುದೇವನ ನಾಮ ಬಾಯ್ತುಂಬ ನೆನೆದರೆ ಕ್ಲೇಶಗಳೆಂಬುದು ಲೇಶ ಮಾತ್ರವಿಲ್ಲ ಚೋರರ ಭಯವಿಲ್ಲವೊ ಹರಿನಾಮಕ್ಕೆ ಯಾರ ಅಂಕೆಯಿಲ್ಲವೊ ಊರನಾಳುವ ದೊರೆಗೆ ನೀತಿ ಭೀತಿಗಳಿಲ್ಲ ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ ಸ್ನಾನವ ಮಾಡಲೇಕೆ ಮಾನವರಿಗೆ ಮೌನ ಮಂತ್ರಗಳೇಕೆ ದೀನಪಾಲಕ ನಮ್ಮ ಬೆಟ್ಟದ ಒಡೆಯನ ಧ್ಯಾನಕೆ ಸರಿಯುಂಟೆ ಪುರಂದರವಿಠಲ

English Transliteration

Naaraayana ennirō Shree Narahari paaraayana maadirō Naaraayananendu Ajamila nu kaivalya seridanembo suddiya keli ariyirō Kaashige hōgalēke Kaavadi pottu bēsattu tirugalēke Vaasudevana naama baaytumba nenedare klēshagalembudu lēsha maatrawilla Chōrara bhayavillavō Harināmakke yaara ankkeyillavō Ūranāḷuva dorege neeti bheethigalilla Ghōra paatakavella doora maaduvudakke Snaana maadalēke Maanavarige mauna mantragalēke Deenapaalaka namma bettada odeyana dhyaanake sariyunte Purandara Vitthala

🏷 Labels:
Narayana, Vittala, PurandaraDasa, DasaraPadagalu

Comments