ಒಮ್ಮನದಿಂದ ತನ್ನನು ಭಜಿಪರ
🙏 Theme: ಶ್ರೀ ನರಸಿಂಹ / ಹರಿಭಕ್ತಿ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಒಮ್ಮನದಿಂದ ತನ್ನನು ಭಜಿಪರ ಸಮ್ಮತದಿಂದ ಕಾಯ್ವೆನೆಂದ ಹರಿ ಸಿಂಹರೂಪನಾದ ಶ್ರೀ ಹರಿ ಶ್ರೀ ನಾಮಗಿರೀಶನೇ ತರಳನು ಕರೆಯೆ ಸ್ಥಂಭವು ಬಿರಿಯೇ ತುಂಬು ಉಗ್ರವ ತೋರಿದನು ಕರುಳನು ಬಗೆದು ಕೊರಳೋಳು ಇಟ್ಟು ತರಳನ ಸಲಹಿದ ಶ್ರೀ ನರಸಿಂಹನೆ ಭಕ್ತರೆಲ್ಲ ಕೂಡಿ ಬಹುದೂರ ಓಡಿ ಪರಮ ಶಾಂತವನು ಬೇಡಿದರು ಕರೆತಂದು ಸಿರಿಯ ತೊಡೆಯೊಳು ಕುಳಿಸಲು ಪರಮ ಹರುಷವ ಹೊಂದಿದ ಶ್ರೀ ಹರಿ ಜಯ ಜಯ ಜಯವೆಂದು ಹೂವನು ತಂದು ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸಿ ಭಯ ನಿವಾರಣ ಭಾಗ್ಯ ಸ್ವರೂಪನೇ ಪರಮ ಪುರುಷ ಶ್ರೀ ಪುರಂದರ ವಿಟ್ಟಲನೆ
English Transliteration
Ommanadinda tannanu bhajipara Sammatadinda kaayvenenda Hari Simharoopanaada Sri Hari Sri Namagireeshane Taralanu kareye stambhavu biriye Tumbu ugrava toridanu Karulanu bagedu koralolu ittu Taralana salahida Sri Narasimhane Bhaktarella koodi bahudura odi Parama shaantavanu bedidaru Karetandu siriya todeyolu kulisalu Parama harushava hondida Sri Hari Jaya jaya jayavendu hoovanu tandu Hari Hari Hariyendu surarella surisi Bhaya nivaarana bhaagya swaroopane Parama Purusha Sri Purandara Vittalane
Narasimha, Vishnu, PurandaraDasa, DasaraPadagalu, KannadaLyrics, DevotionalSongs
Comments
Post a Comment