ಶರಣು ಶಿವ ಶಿವ
🙏 Theme: ಶಿವ ಭಕ್ತಿ
📜 Category: ಭಜನೆಗಳು
ಕನ್ನಡ ಸಾಹಿತ್ಯ
ಶರಣು ಶಿವ ಶಿವ ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ ಕರವ ಪಿಡಿದು ಸುಮತಿಯಿಟ್ಟು ಪೊರೆಯೊ ಶಿವ ಶಿವಾ ದಂತಿ ಚರ್ಮ ಹೊದ್ದ ಭಸ್ಮ ರೂಪ ಶಿವ ಶಿವಾ ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವಾ ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ ಮಂದಮತಿಯ ತಪ್ಪನೆಣಿಸಬ್ಯಾಡ ಶಿವ ಶಿವಾ ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವಾ ಮಂದಗಮನೆ ನಿನ್ನ ಮನದೊಳಿಲ್ಲೆ ಶಿವ ಶಿವಾ ತಂದು ಕೊಂಡ ದಕ್ಷ ವೃಥ ಕುವಾರ್ತಿ ಶಿವ ಶಿವಾ ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವಾ ಮಾನಯಜ್ಞ ಸಹಾಯನಾಗು ದಯದಿ ಶಿವ ಶಿವಾ ಏನುಪಾಯವಿದಕೆ ಚಿಂತಿಪುದು ಶಿವ ಶಿವಾ ಪ್ರಾಣೇಶವಿಠಲ ನಿನ್ ವಶದೊಳಿಹನು ಶಿವ ಶಿವಾ
English Transliteration
Sharanu Shiva Shiva Sharanu ninna charana kamalagalige Shiva Shiva Karava pididu sumatiyittu poreyo Shiva Shiva Danti charma hodda bhasma roopa Shiva Shiva Chinte rahita layake kartanaada Shiva Shiva Santarinda satata seve gomba Shiva Shiva Kantu pitana poorna preeti patra Shiva Shiva Mandamatiya tappanenisabyaada Shiva Shiva Kundu ninage endigendigilla Shiva Shiva Mandagamane ninna manadolille Shiva Shiva Tandu konda daksha vrutha kuvarthi Shiva Shiva Heenaranta ninage kopa salla Shiva Shiva Maanayajna sahaayanagu dayadi Shiva Shiva Enupaayavidake chintipudu Shiva Shiva Praneshavithala nin vashadolihanu Shiva Shiva
Shiva, Shivabhajane, Bhajans, KannadaLyrics, DevotionalSongs
Comments
Post a Comment