ಶ್ರೀ ಭಾಗವತ ಮಹಿಮೆ
🙏 Theme: ಭಾಗವತ ಮಹಿಮೆ / ಶ್ರೀಕೃಷ್ಣ / ವೇಂಕಟೇಶ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಶ್ರೀ ಭಾಗವತ ಮಹಿಮೆ ಬಣ್ಣಿಸಲಳವೇ ||ಪ|| ಈ ಭವಶರಧಿಗೆ ಸುನಾವೆಯಂತಿಹುದಯ್ಯ ||ಅ.ಪ|| ವೇದ ಶಾಸ್ತ್ರಾದಿ ಅನೇಕ ಧರ್ಮಗಳಲ್ಲಿ ಈ ದೇಹ ಸಾಧನವಾದ ಸದ್ಧರ್ಮಗಳು ಆ ಪರಾಶರ ಸೂನು ಶ್ರೀ ಮನ್ನಾರಾಯಣ ಆಪದ್ಬಾಂಧವನಲ್ಲದಿನ್ನಿಲ್ಲವೆಂಬುವಾ ||1|| ಪ್ರಥಮ ಸ್ಕಂದದಲಿ ಶ್ರೀ ಪರಮಾತ್ಮನ ಸುಜ್ಞಾನಕೆ ಪಥವೆ ಭಕ್ತಿ ವೈರಾಗ್ಯದ ವಿವರಣೆಯು ಮತ್ತೆ ಶಾಪದಲಿ ನಾರದನ ವಿಷಯವ ಪೇಳ್ವ ||2|| ದ್ವಿತೀಯ ಸ್ಕಂದದಿ ಪರೀಕ್ಷಿತ ಶುಕ ಸಂವಾದ ಶ್ರೀಹರಿಯ ಅವತಾರಗಳ ವರ್ಣನೆಗಳು ಮತ್ತೆ ಮಹದಾದಿ ತತ್ವ ಸೃಷ್ಟಿಕ್ರಮ ಇತ್ಯಾದಿ ಪುಣ್ಯಚರಿತಗಳನು ಪೇಳ್ವ ||3|| ಆ ಬೊಮ್ಮಂಡದಿಂದೆ ಚತುರ್ಮುಖನ ಸೃಷ್ಟಿಯು ವಿಭಾಗವ ಪೇಳ್ವ ಸೂಕ್ಷ್ಮ ಪರಮಾಣು ಅಬ್ದಾದಿ ಕಾಲಗಳು ವ್ಯಷ್ಟಿ ಭೂತೋತ್ಪತ್ತಿ ಶ್ರೀ ವರಹ ರೂಪದಿ ತೋರಿದ ಮಹಿಮೆಯಾ ||4|| ವರಹಾವತಾರದೀ ಧರಣೀಯ ತಂದಂಥ ಪುರುಷ ಸ್ತ್ರೀಯರ ಸೃಷ್ಟಿ ಸರ್ವಸೃಷ್ಟಿಯು ಮತ್ತೆ ಸ್ವಾಯಂಭುಮನು ಶತರೂಪೆಯರ ಚರಿತೆ ಶ್ರೀ ಕಪಿಲ ದೇವಹೂತಿಯ ಸಂವಾದವ ಪೇಳ್ವ ||5|| ಚತುರ ಸ್ಕಂದದಿ ನವಬ್ರಹ್ಮರ ಉತ್ಪತ್ತಿ ದಕ್ಷಾಧ್ವರಭಂಗ ಭಕ್ತಧ್ರುವಚರಿತೆ ಉಚಿತವಾದ ಪೃಥು ಸಾರ್ವಭೌಮರಿಂದ ಪ್ರಾಚೀನ ಬರ್ಹಿಷರ ವೃತ್ತಾಂತವನು ಪೇಳ್ವ ||6|| ಪಂಚಮ ಸ್ಕಂದದಿ ಪ್ರಿಯವ್ರತ ನಾಭಿ ನೃಪರ ಋಷಭ ಚರಿತೆಗಳು ಪುತ್ರ ಭರತನ ಕಥೆಯು ಅಚಲಲೋಕ ದ್ವೀಪಾದ್ರಿ ನದ ನದಿಗಳ ಸೃಷ್ಟಿ ಜ್ಯೋತಿಶ್ಚಕ್ರ ನರಕ ಪಾತಾಳಗಳ ಪೇಳ್ವ ||7|| ಷಷ್ಠ ಸ್ಕಂದದೊಳು ದಕ್ಷ ಜನ್ಮವು ಅವರ ಕನ್ಯೆಯರಿಂದ ದೇವ ಮಾನವ ದಾನವ ದುಷ್ಟಮೃಗ ಪಕ್ಷೀ ಪನ್ನಗಾದಿ ಜನನವು ವೃತ್ರನ ಜನನ ಮರಣಗಳೆಲ್ಲ ಪೇಳ್ವ ||8|| ಸಪ್ತಮ ಸ್ಕಂದದಿ ದಿತಿಪುತ್ರರ ಜನನ ಹಿರಣ್ಯಕಶಿಪುವಿನ ದುರುಳತನವು ಮತ್ತೆ ಧೀವರನಾದ ಪ್ರಹ್ಲಾದರಾಯನಿಂ ವರ್ಣಿತಮಾದ ಶ್ರೀಹರಿಯ ಮಹಿಮೆಯ ಪೇಳ್ವ ||9|| ಅಷ್ಟಮ ಸ್ಕಂದದಿ ಮನ್ವಂತರ ವಿವರವು ಗಜರಾಜನಿಗೆ ಮೋಕ್ಷ ಮನ್ವಂತರ ಅವತಾರ ದಿಟ್ಟ ಕಮಠ ಮತ್ಸ್ಯನರಹರಿ ವಾಮನ ಹಯವದನನವತಾರ ಸುಧೆಯಿತ್ತ ಮಹಿಮೆಯ ||10|| ನವಮ ಸ್ಕಂದದಿ ನೃಪವಂಶಾನು ಚರಿತವು ಇಕ್ಷ್ವಾಕುಸುತ ಸುದ್ಯುಮ್ನರಾಜನ ಜನನ ದಿವಾಕರ ವಂಶಾನು ಕಥನಗಳು ಇಳೋಪಾಖ್ಯಾನವ ತಾರೋಪಾಖ್ಯಾನವ ಪೇಳ್ವ ||11|| ಸೂರ್ಯವಂಶ ಶಶಾದರಾಜನ ವೃತ್ತ ಸುಕನ್ಯ ಶರ್ಯಾತಿ ಕಾಕುಸ್ಥ ಖಟ್ವಾಂಗ ಧೀರ ಮಾಂಧಾತೃ ಸೌಭರಿ ಸಗರರ ಚರಿತೆ ಪರಮಾತ್ಮ ರಘುರಾಮನ ಚರಿತೆಗಳನು ಪೇಳ್ವ ||12|| ಮತ್ತೆ ನಿಮಿಯ ದೇಹತ್ಯಾಗದ ವಿಷಯವು ಜನಕನೃಪ ಭೃಗುರಾಮನ ಚರಿತವು ಉತ್ತಮ ಚಂದ್ರವಂಶದ ನಹುಷಾಸುತ ಯಯಾತಿ ಶಂತನುಯದು ಚರಿತೆಗಳುಳ್ಳ ||13|| ದಶಮ ಸ್ಕಂದದಿ ಹರಿ ಯದುವಂಶದಿ ಜನಿಸಿ ಶಿಶುಲೀಲೆಗಳ ತೋರಿ ಅಸುರಿ ಪೂತನಿ ಕೊಂದು ಅಸುರ ಶಕಟ ತೃಣ ಬಕ ವತ್ಸ ಮೊದಲಾದ ಅಸುರಭಂಜಕ ಹರಿಯು ಮೆರೆದ ಮಹಿಮೆಯ ಪೇಳ್ವ ||14|| ಮಾಯಾ ಮಹಿಮಧೇನು ಪ್ರಲಂಬಕರಾ ಕೊಂದು ಕಾಡುಕಿಚ್ಚಿನಿಂದ ಗೋಪಾಲರ ಕಾಯ್ದ ನೋಯಿಸಿ ಕಾಳಿಯ ಬಾಯ ಬಿಡಿಸಿ ಕಾಳಿಮರ್ದನ ಕೃಷ್ಣ ನಾಡಿದ ||15|| ಗೋಪಸ್ತ್ರೀಯರ ಚರಿತ ಗೋವರ್ಧನೋದ್ಧಾರಣ ಶಂಖಚೂಡವಧೆ ಅರಿಷ್ಟಕೇಶಿಯ ನಿಧನ ಭೂಪನೆದುರಿನಲ್ಲಿ ಜಟ್ಟಿಮುಷ್ಟಿಕರ ಕೊಂದು ಕಂಸವಧೆಯ ಮಾಡಿ ಗುರುಸುತನನು ತೋರ್ದ ||16|| ಜರೆಯ ಸೇನೆಯ ಜಯಿಸಿ ಕಾಲಯವನರ ಕೊಂದು ಪಾರಿಜಾತವ ತಂದು ಸಿರಿ ರುಕ್ಮಿಣಿಯ ಪಡೆದು ಹರಿಸಿ ಬಾಣನ ತೋಳ ನರಕಾಸುರನ ಗೆದ್ದು ಸೆರೆಯ ಬಿಡಿಸಿ ರಾಜಕನ್ಯೆಯರನು ಕಾಯ್ದ ||17|| ಶಿಶುಪಾಲ ದಂತವಕ್ತ್ರ ಪೌಂಡ್ರಕ ಸಾಲ್ವ ಶಂಬರ ದ್ವಿವಿಧ ಮುರಾಸುರರೆಲ್ಲರ ನಾಶಪಡಿಸಿ ಕಾಶೀಪುರವ ದಹನ ಮಾಡಿ ಪಾಂಡವರನ್ನು ಕಾಯ್ದ ಪರಮ ಮಹಿಮೆಯ ಪೇಳ್ವ ||18|| ಭೂಭಾರನಿಳುಹಲು ಕುರು ಪಾಂಡವರೊಳು ಕ್ರೂರಯುದ್ಧವ ಕುರುಕ್ಷೇತ್ರದಿ ಮಾಡಿಸಿ ಅಭಯದಾಯಕ ಪಾಂಡುನಂದನರಿಂದ ಸದ್ಧರ್ಮ ಸ್ಥಾಪಿಸಿದ ಶ್ರೀಕೃಷ್ಣಚರಿತೆಯ ಪೇಳ್ವ ||19|| ಏಕಾದಶ ಸ್ಕಂದದಿ ಯಾದವರೆಲ್ಲರು ಭೂಸುರ ಶಾಪದಿ ಯುದ್ಧವನೆ ಮಾಡಿ ಏಕನಾಗಿದ್ದ ಉದ್ಧವನಿಗೆ ಬೋಧಿಸಿ ಲೋಕಾವನೈದು ನಿಜಧಾಮಕ್ಕೆ ತೆರಳಿದ ||20|| ದ್ವಾದಶಸ್ಕಂದದೊಳು ಯುಗಭೇದ ಪ್ರಳಯಗಳು ನಿತ್ಯನೈಮಿತ್ತಿಕ ಪ್ರಾಕೃತಗಳ ಸೃಷ್ಟಿ ವೇದ ವಿಭಾಗವು ಹರಿರಾತನ ಅಂತ್ಯ ಮಾರ್ಕಂಡೇಯ ಚರಿತ ಸೂರ್ಯಗಣಗಳ ಪೇಳ್ವ ||21|| ಹರಿಲೀಲೆ ಅವತಾರಚರಿತೆಯ ಕೇಳುತ ಮರೆವೆಯಿಂದಾಗಲಿ ರುಜೆಯಿಂದಾಗಲಿ ಹರಿಯೇನಮಃ ಎಂದುಚ್ಚರಿಸಿದ ಮಾತ್ರದಿ ದುರಿತಪಾಪವು ನಾಶವಾಗಿ ಪೋಗುವುದಯ್ಯ ||22|| ಹರಿಯ ಸ್ಮರಣೆಯ ಮಾಡಿದರು ಕೇಳಿದರು ಬಿರುಗಾಳಿಗೆ ಸಿಕ್ಕು ಮೋಡ ಓಡುವಂತೆ ದುರಿತವ್ಯಾಧಿಗಳು ತ್ವರಿತದಿ ಓಡುವುವು ಹರಿಸಂಬಂಧವಲ್ಲದ ಮಾತೆಲ್ಲವೂ ವ್ಯರ್ಥವೋ ||23|| ಯಾಮ ಯಾಮಕೆ ಈ ಭಾಗವತವ ಪಠಿಸೆ ಭಾಗವತದ ಸಪ್ತಾಹದ ಪುಣ್ಯಫಲವು ಭಾವ ಭಕುತಿಯು ಹುಟ್ಟಿ ಶ್ರೀ ವೇಂಕಟೇಶನ ಪಾವನವಾದ ಶ್ರೀಪಾದವ ಸೇರುವ ||24||
English Transliteration
Shree Bhaagavata mahime bannisalalave ||Pa|| Ee bhavasharadhige sunaaveyantihudayya ||A.Pa|| Veda shaastraadi aneka dharmagalalli Ee deha saadhanavaada saddharmagalu Aa Paraashara soonu Shree Mannaarayana Aapadbhaandhavanalladinnillavembuvaa ||1|| Prathama skandadali Shree Paramaatmana sujnaanake Pathave bhakti vairaagyada vivaraneyu Matte shaapadali Naaradana vishayava pelva ||2|| Dviteeya skandadi Pareekshita Shuka samvaada Shreehariya avataaragala varnanegalu Matte mahadaadi tatva srushtikrama Ityaadi punyacharitagalanu pelva ||3|| Aa bommandadinde chaturmukhana srushtiyu Vibhaagava pelva sookshma paramaanu Abdaadi kaalugalu vyashti bhoototpatti Shree Varaaha roopadi torida mahimeyaa ||4|| Varahaavataaradee dharaneeya tandantha Purusha streeyara srushti sarvasrushtiyu matte Swaayambhumanu shataroopeyara charite Shree Kapila Devahootiya samvaadava pelva ||5|| Chatura skandadi navabrahmara utpatti Dakshaadhvara bhanga bhakta Dhruvacharite Uchitavaada Pruthu saarvabhoumarinda Praacheena Barhishara vruttaantavanu pelva ||6|| Panchama skandadi Priyavrata Naabhi nrupura Rushabha charitegalu putra Bharatana katheyu Achalaloka dveepaadri nada nadigala srushti Jyotishchakra naraka paataalagala pelva ||7|| Shashtha skandadolu Daksha janmavu Avara kanyeyarinda deva maanava daanava Dushtamruga pakshi pannagaadi jananavu Vrutrana janana maranagalella pelva ||8|| Saptama skandadi Ditiputrara janana Hiranyakashipuvina durulatanavu Matte dheevaranaada Prahlaadaraayanim va- rnithamaada Shreehariya mahimeya pelva ||9|| Ashtama skandadi manvantara vivaravu Gajaraajanige moksha manvantara avataara Ditta kamatha matsya narahari vaamana Hayavadanana avataara sudheyitta mahimeya ||10|| Navama skandadi nrupavamshaanu charitavu Ikshvaakusuuta Sudyumnaraajana Janana divaakara vamshaanu kathanagalu Ilopaakhyaanava taaropaakhyaanava pelva ||11|| Sooryavamsha Shashaadaraajana vrutta Sukanya Sharyaati Kaakustha Khatvaanga dheera maan- dhaatru Saubhari Sagarara charite Paramaatma Raghuraamana charitegalanu pelva ||12|| Matte Nimiya dehatyaagada vishayavu Janakanrupa Bhruguraamana charitavu Uttama Chandravamshada Nahushaasuta Ya- yaati Shantanuyadu charitegalulla ||13|| Dashama skandadi Hari Yaduvamshadi janisi Shishuleelegalu tori asuri Pootani kondu Asura Shakata Truna Baka Vatsa modalada Asurabhanjaka Hariyu mereda mahimeya pelva ||14|| Maayaa mahimadhenu Pralambakaraa kondu Kaadukicchininda Gopaalara kaayda Noyisi Kaaliya baaya bidisi Kaalimardana Krishna naadida ||15|| Gopastreeyara charita Govardhanoddhaarane Shankhachooda vadhe Arishtakeshiya nidana Bhoopanedurinali Jattimushtikara kondu Kamsavadheya maadi gurusutananu torda ||16|| Jareya seneya jayisi Kaalayavanara kondu Paarijaatava tandu Siri Rukminiya padedu Harisi Baanana tola Narakaasurana geddu Sereya bidisi raajakanyeyaranu kaayda ||17|| Shishupaala Dantavaktra Poundraka Saalva Shambara Dvividha Muraasurarellara naashapadisi Kaasheepurava dahana maadi Paandavarannu kaayda Parama mahimeya pelva ||18|| Bhoobhaaraniluhalu Kuru Paandavarolu Kroorayuddhava Kurukshetradi maadisi Abhayadaayaka Paandunandanarinda Saddharma sthaapisida Shreekrishnachariteya pelva ||19|| Ekaadasha skandadi Yaadavarellaru Bhoosura shaapadi yuddhavane maadi Ekanagidda Uddhavanige bodhisi Lokaavanaitu nijadhaamakke teralida ||20|| Dvaadasha skandadolu yugabheda pralayagalu Nityanaimittika praakruthagala srushti Veda vibhaagavu Hariraatana antya Maarkandeya charita sooryaganagala pelva ||21|| Harileele avataarachariteya keluta Mareveyindaagali rujeyindaagali Hariyenamah enduchcharisida maatrradi Duritapaapavu naashavaagi poguvudayya ||22|| Hariya smaraneya maadidaru kelidaru Birugaalige sikku moda oduvante Duritavyaadhigalu tvaritadi oduvuvu Harisambandhavallada maatellavoo vyarthavo ||23|| Yaama yaamake ee Bhaagavatava pathise Bhaagavatada saptaahada punyaphalavu Bhaava bhakutiyu hutti Shree Venkateshana Paavanavaada Shreepaadava seruva ||24||
Bhagavata, Krishna, Venkatesha, DasaraPadagalu
Comments
Post a Comment